Android ಸಾಧನಗಳಿಗಾಗಿ—ಅಂದರೆ, ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳಿಗಾಗಿ—Zoho Sheet ಆ್ಯಪ್ ಬಳಸಿಕೊಂಡು ನಿಮ್ಮ ಸ್ಪ್ರೆಡ್ಶೀಟ್ಗಳನ್ನು ರಚಿಸಿ, ಎಡಿಟ್ ಮಾಡಿ, ಹಂಚಿಕೊಳ್ಳಿ ಮತ್ತು ಸಹಯೋಗ ನಡೆಸಿ—ಅದೂ ಉಚಿತವಾಗಿ. ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಕೆಲಸ ಮಾಡಿ.
ಸ್ವತಂತ್ರ ಸ್ಪ್ರೆಡ್ಶೀಟ್ ಅಪ್ಲಿಕೇಶನ್ ಆಗಿ, ನಾವು ನಿಮ್ಮ ಕ್ರೆಡಿಟ್ ಅಥವಾ ಡೆಬಿಲ್ ಕಾರ್ಡ್ಗಳನ್ನು ಲಿಂಕ್ ಮಾಡುವಂತೆ ಕೇಳುವುದಿಲ್ಲ ಮತ್ತು ಮರೆಮಾಡಿದ ವೆಚ್ಚಗಳನ್ನು ನಂತರ ವಿಧಿಸುವುದಿಲ್ಲ—ಇದು ಪೂರ್ಣವಾಗಿ ಉಚಿತ ಅನುಭವವಾಗಿದೆ.
ನೀವು ಆನ್ಲೈನ್ನಲ್ಲಿ ಕೆಲಸ ಮಾಡಲು ಬಯಸಿದರೆ ಸೈನ್ ಅಪ್ ಮಾಡಬೇಕಾಗುತ್ತದೆ ಅಷ್ಟೇ. ಆಫ್ಲೈನ್ನಲ್ಲಿ ಕೆಲಸ ಮಾಡಲು ಬಯಸುತ್ತೀರಾ? ಈಗಲೇ ಪ್ರಾರಂಭಿಸಿ—ಸೈನ್ ಅಪ್ ಅಗತ್ಯವಿಲ್ಲ.
Zoho Sheet ಜೊತೆಗೆ, ನೀವು:
ಆರಂಭದಿಂದ ನೀವು ಸ್ಪ್ರೆಡ್ಶೀಟ್ಗಳನ್ನು ರಚಿಸಬಹುದು ಮತ್ತು ಆ್ಯಪ್ ಒಳಗಿನಿಂದಲೇ ಅವುಗಳನ್ನು
ಸಂಪೂರ್ಣವಾಗಿ ನಿರ್ವಹಿಸಬಹುದು.
ಕ್ಲೌಡ್ನಲ್ಲಿ ಫೈಲ್ಗಳನ್ನು ಆ್ಯಕ್ಸೆಸ್ ಮಾಡಿ ಅಥವಾ ಅಗತ್ಯವಿರುವಂತೆ ನಿಮ್ಮ ಸಾಧನದಲ್ಲಿ ಆಫ್ಲೈನ್ನಲ್ಲಿ ಕೆಲಸ ಮಾಡಿ.
ನಿಮ್ಮ ಸಾಧನ ಮತ್ತು Box ಹಾಗೂ DropBox ನಂತಹ ಕ್ಲೌಡ್ ಆ್ಯಪ್ಗಳಲ್ಲಿ ಸಂಗ್ರಹಣೆ ಮಾಡಿದ MS Excel ಫೈಲ್ಗಳು (XLSX, XLS, XLSM ಮತ್ತು XLTM) ಹಾಗೂ CSV, TSV, ODS ಇನ್ನೂ ಮುಂತಾದವುಗಳನ್ನು ತೆರೆಯಿರಿ ಮತ್ತು ಎಡಿಟ್ ಮಾಡಿ.
ಚಿತ್ರದಿಂದ ಡೇಟಾ ಬಳಸಿಕೊಂಡು ಬಿಲ್ಗಳು, ಇನ್ವಾಯ್ಸ್ಗಳು, ರಶೀದಿಗಳಿಗಾಗಿ ಸ್ಪ್ರೆಡ್ಶೀಟ್ಗಳನ್ನು ರಚಿಸಿ. ನಿಮ್ಮ ಕಾಗದದ ರೆಕಾರ್ಡ್ಗಳನ್ನು ಸ್ಕ್ಯಾನ್ ಮಾಡಿ ಮತ್ತು ಕೆಲವೇ ಸೆಕೆಂಡ್ಗಳಲ್ಲಿ ಅವುಗಳನ್ನು ಸ್ಪ್ರೆಡ್ಶೀಟ್ಗಳಾಗಿ ಪರಿವರ್ತಿಸಿ.
ನಮ್ಮ ರೆಡಿಮೇಡ್ ಸ್ಪ್ರೆಡ್ಶೀಟ್ ಟೆಂಪ್ಲೇಟ್ಗಳನ್ನು ಬಳಸಿಕೊಂಡು ಶೀಘ್ರದಲ್ಲಿ ನಿಮ್ಮ ಟೈಮ್ಶೀಟ್ಗಳನ್ನು, ಬಜೆಟ್ ಸ್ಪ್ರೆಡ್ಶೀಟ್ಗಳನ್ನು ಮತ್ತು ಇನ್ನಷ್ಟನ್ನು ಸೆಟ್ ಅಪ್ ಮಾಡಿ.
ಸಹಯೋಗಿಗಳೊಂದಿಗೆ ನಿಮ್ಮ ಸ್ಪ್ರೆಡ್ಶೀಟ್ಗಳನ್ನು ಹಂಚಿಕೊಳ್ಳಿ, ಭಿನ್ನ ಅನುಮತಿ ಮಟ್ಟಗಳನ್ನು ಸೆಟ್ ಮಾಡಿ ಮತ್ತು ನೈಜ ಸಮಯದಲ್ಲಿ ಜೊತೆಯಾಗಿ ಕೆಲಸ ಮಾಡಿ.
ಕಾಮೆಂಟ್ಗಳನ್ನು ಸೇರಿಸಿ—ಸೆಲ್ ಅಥವಾ ಶ್ರೇಣಿಯ ಮಟ್ಟದಲ್ಲಿ—ಮತ್ತು ಸುಧಾರಿತ ತಂಡದ ಕೆಲಸಕ್ಕಾಗಿ
ಸಹಭಾಗಿಗಳನ್ನು ಟ್ಯಾಗ್ ಮಾಡಲು @ಉಲ್ಲೇಖಗಳನ್ನು ಬಳಸಿ.
ವಿವಿಧ ಡೇಟಾ ವ್ಯಾಲಿಡೇಶನ್ ಟೂಲ್ಗಳೊಂದಿಗೆ ನಿಖರ ಡೇಟಾ ಎಂಟ್ರಿಯನ್ನು ಖಚಿತಪಡಿಸಿಕೊಳ್ಳಿ.
ಎಲ್ಲ ಮೂಲಭೂತ ಟೂಲ್ಗಳೊಂದಿಗೆ ನಿಮ್ಮ ಸೆಲ್ಗಳನ್ನು ಫಾರ್ಮ್ಯಾಟ್ ಮಾಡಿ, ವಿಂಗಡಿಸಿ ಮತ್ತು ಫಿಲ್ಟರ್ ಮಾಡಿ ಮತ್ತು ಷರತ್ತುಬದ್ಧ ಫಾರ್ಮ್ಯಾಟಿಂಗ್ ಅನ್ವಯಿಸಿ.
VLOOKUP ನಿಂದ XLOOKUP ಹಾಗೂ IF ಮತ್ತು ಇನ್ನಷ್ಟರವರೆಗೆ—350 ಕ್ಕೂ ಹೆಚ್ಚು ಫಂಕ್ಷನ್ಗಳು ಮತ್ತು ಫಾರ್ಮುಲಾಗಳ ಜೊತೆಗೆ ಸಂಖ್ಯೆಗಳನ್ನು ಸಂಕ್ಷೇಪಿಸಿ.
35 ಕ್ಕೂ ಅಧಿಕ ವಿಧಗಳ ಚಾರ್ಟ್ಗಳೊಂದಿಗೆ ನೀವು ಕಂಡುಕೊಂಡಿದ್ದನ್ನು ದೃಶ್ಯೀಕರಿಸಿ.
ನಮ್ಮ ದೇಶೀ ಕೃತಕ ಬುದ್ಧಿಮತ್ತೆಯಾದ Zia, ಭಾರೀ ಕೆಲಸಗಳನ್ನು ನಿರ್ವಹಿಸಲಿ—ಸ್ಮಾರ್ಟ್ ಡೇಟಾ ವಿಶ್ಲೇಷಣೆಯ ಸಲಹೆಗಳನ್ನು ಪಡೆಯಿರಿ, ಚಾರ್ಟ್ಗಳು ಮತ್ತು ಪಿವೋಟ್ ಟೇಬಲ್ಗಳನ್ನು ಸ್ವಯಂಚಾಲಿತವಾಗಿ ಜನರೇಟ್ ಮಾಡಿ ಮತ್ತು ವಾಯ್ಸ್ ಕಮಾಂಡ್ಗಳನ್ನು ಬಳಸಿಕೊಂಡು ಪ್ರಶ್ನೆಗಳನ್ನು ಸಹ ಕೇಳಿ.
ನೀವು ಮಾಡುವ ಪ್ರತಿ ಕೆಲಸವನ್ನೂ ಸ್ವಯಂಚಾಲಿತವಾಗಿ ಮತ್ತು ಸುರಕ್ಷಿತವಾಗಿ ಉಳಿಸಲಾಗುತ್ತದೆ ಎಂಬ ಕುರಿತು ಭರವಸೆಯಿಂದಿರಿ.
ಪ್ಲ್ಯಾಟ್ಫಾರ್ಮ್ಗಳಾದ್ಯಂತ ನಿಮ್ಮ ಡೇಟಾವನ್ನು ಸಿಂಕ್ನಲ್ಲಿ ಇರಿಸಿ
Zoho Sheet ವೆಬ್ ಮತ್ತು iOS ನಲ್ಲೂ ಸಹ ಲಭ್ಯವಿದೆ. ಅತ್ಯುತ್ತಮ ಭಾಗ ಯಾವುದು? ಡೇಟಾ ತಕ್ಷಣವೇ ಮತ್ತು ಸ್ವಯಂಚಾಲಿತವಾಗಿ ಸಿಂಕ್ ಆಗುತ್ತದೆ, ಇದರಿಂದಾಗಿ ನೀವು ಯಾವುದೇ ಸಮಯದಲ್ಲಿ ಪ್ಲ್ಯಾಟ್ಫಾರ್ಮ್ಗಳಾದ್ಯಂತ ಬದಲಿಸಬಹುದು.
Zoho ದ ಗೌಪ್ಯತೆ ಭರವಸೆ
ನಿಮ್ಮ ಗೌಪ್ಯತೆಯನ್ನು ಗೌರವಿಸುವುದು ಕಂಪನಿಯಾಗಿ ಯಾವಾಗಲೂ ನಮ್ಮ ಸಿದ್ಧಾಂತದ ಮೂಲ
ಧ್ಯೇಯವಾಗಿದೆ. 25+ ವರ್ಷಗಳ ನಮ್ಮ ಇತಿಹಾಸದಲ್ಲಿ, ನಮ್ಮ ಬಳಕೆದಾರರ ಮಾಹಿತಿಯನ್ನು ಜಾಹೀರಾತಿಗಾಗಿ ನಾವು ಯಾರಿಗೂ ಮಾರಾಟ ಮಾಡಿಲ್ಲ ಅಥವಾ ತರ್ಡ್ ಪಾರ್ಟಿ ಜಾಹೀರಾತುಗಳನ್ನು ತೋರಿಸುವ ಮೂಲಕ ಆದಾಯವನ್ನು ಗಳಿಸಿಲ್ಲ. ನಿಮ್ಮ ಸ್ಪ್ರೆಡ್ಶೀಟ್ ಡೇಟಾ ನಿಮ್ಮಲ್ಲೇ ಉಳಿಯುತ್ತದೆ.
ವ್ಯವಹಾರಗಳಿಗಾಗಿ Zoho ಅನುಕೂಲ
Zoho Sheet ಎಂಬುದು Zoho ಆಫೀಸ್ ಸೂಟ್ನಲ್ಲಿನ ಸ್ಪ್ರೆಡ್ಶೀಟ್ ಸಾಫ್ಟ್ವೇರ್ ಆಗಿದ್ದು, ಇದು ವರ್ಡ್
ಪ್ರೊಸೆಸಿಂಗ್ಗಾಗಿ Zoho Writer ಮತ್ತು ಪ್ರಸ್ತುತಿಗಳಿಗಾಗಿ Zoho Show ಅನ್ನು ಕೂಡ ಒಳಗೊಂಡಿದೆ. ನೀವು Zoho Sheet ಗಾಗಿ ಸೈನ್ ಅಪ್ ಮಾಡಿದಾಗ, ನಿಮ್ಮ ಶೀಟ್ಗಳು, ಪ್ರಸ್ತುತಿಗಳು ಮತ್ತು ವರ್ಡ್ ಡಾಕ್ಯುಮೆಂಟ್ಗಳನ್ನು ಒಂದೇ ಸ್ಥಳದಲ್ಲಿ ರಚಿಸಲು ಮತ್ತು ನಿರ್ವಹಿಸಲು ನೀವು ವಿವಿಧ ಟೂಲ್ಗಳನ್ನು ಪಡೆಯುತ್ತೀರಿ. ಇದು ಆನ್ಲೈನ್ ಫೈಲ್ ಸಂಗ್ರಹಣೆ ಮತ್ತು ಸಹಯೋಗದ ಟೂಲ್ ಆಗಿರುವ Zoho WorkDrive ಮತ್ತು ಇ-ಮೇಲ್ ಮತ್ತು ಸಹಯೋಗದ ಸೂಟ್ ಆಗಿರುವ Zoho Workplace ನ ಭಾಗವೂ ಆಗಿದೆ.
Zoho ದ ಸಿಂಗಲ್ ಸೈನ್-ಆನ್ ಖಾತೆಯು ನಿಮಗೆ ಅಗತ್ಯವಿರುವ ಎಲ್ಲ Zoho ಆ್ಯಪ್ಗಳನ್ನು ಆ್ಯಕ್ಸೆಸ್
ಮಾಡುವುದನ್ನು ನಿಮಗೆ ಸುಲಭವಾಗಿಸುತ್ತದೆ. ನಮ್ಮ ಪರಿಸರ ವ್ಯವಸ್ಥೆಯು ಪ್ರಸ್ತುತ ಸೇಲ್ಸ್, ಮಾರ್ಕೆಟಿಂಗ್, ಇ-ಮೇಲ್ ಮತ್ತು ಸಹಯೋಗ, ಫೈನಾನ್ಸ್, HR ಇನ್ನೂ ಮುಂತಾದ ವಿವಿಧ ವ್ಯವಹಾರ ಕೆಟಗರಿಗಳಾದ್ಯಂತ—55+ ಆ್ಯಪ್ಗಳನ್ನು ಒದಗಿಸುತ್ತದೆ.
ಹೆಚ್ಚಿನ ವಿವರಗಳಿಗಾಗಿ ಭೇಟಿ ನೀಡಿ: https://www.zoho.com/sheet/mobile.html
ಆ್ಯಪ್ ಪ್ರಯತ್ನಿಸುವುದಕ್ಕೆ ಮೊದಲು ಅಥವಾ ಅದನ್ನು ಬಳಸುವಾಗ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ದಯವಿಟ್ಟು ನಮಗೆ ಇಲ್ಲಿಗೆ ಬರೆದು ತಿಳಿಸಿ
[email protected].